Dr. Pushpa Basanagoudar,
Principal
ಪ್ರೀತಿಯ ವಿದ್ಯಾರ್ಥಿಗಳೇ ———–
ಜ್ಞಾನವೇ ಶಕ್ತಿ, ಜ್ಞಾನವೇ ಸಂಪತ್ತು, ಜ್ಞಾನಾಧಾರಿತ ಸಮಾಜ ನಿರ್ಮಾಣವೇ ನಮ್ಮ ಗುರಿ. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಅವರಲ್ಲಿರುವ ಸುಪ್ತಪ್ರತಿಭೆ,ಸೃಜನಶೀಲ, ಕ್ರಿಯಾಶೀಲ ಚಿಂತನೆಗಳ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಕೆಗಳ ಮೂಲಕ ಅವರ ಜ್ಞಾನವೃದ್ಧಿಗೆ ಒತ್ತುನೀಡಲಾತ್ತದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೊಸ ಹೊಸ ತಂತ್ರಜ್ಞಾನ.ಕೌಶ್ಯಲ್ಯಾಧಾರಿತ ಸವಾಲುಗಳನ್ನು ಎಂದುರಿಸಿ,ಜೀವನ ನಿರ್ವಹಿಸಲು ಬೇಕಾದ ಜ್ಞಾನವನ್ನು ಧಾರೆಯೆರೆಯುತ್ತೇವೆ.ವಿದ್ಯಾರ್ಥಿಗಳು ಕೇವಲ ಪದವಿ ಮತ್ತು ಅಂಕಪಟ್ಟಿಗೆ ಸೀಮಿತರಾಗದೆ, ಸ್ವಾವಲಂಬಿಯಾಗಿ ಸಮಾಜದ ಸತ್ಪ್ರಜೆಯಾಗಿ, ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಮೌಲ್ಯಾಧಾರಿತ ಜೀವನ ನಡೆಸಲು ಸನ್ನದ್ಧರನ್ನಾಗಿಸುತ್ತೇವೆ.
ನಮ್ಮ ಮಹಾವಿದ್ಯಾಲಯು ಅತ್ಯಂತ ಅನುಭವಿ ಪ್ರಾಧ್ಯಾಪಕರು, ಎಂ.ಫಿಲ್, ಪಿ.ಎಚ್‌ಡಿ ಪದವೀಧರರ ಸಂಪದ್ಬರಿತ ಸಂಪನ್ಮೂ¯ವನ್ನು ಹೊಂದಿದೆ. ವಿದ್ಯಾರ್ಥಿಗಳ ಅರಿವಿನ ಆಳವನ್ನು ವಿಸ್ತರಿಸಲು, ಸುಂದರ. ವ್ಯಕ್ತಿತ್ವ ನಿರ್ಮಾಣಕ್ಕಾಗಿ ಕಲೆ,ಸಾಹಿತ್ಯ, ಸಂಸ್ಕೃತಿಗಳಲ್ಲಿ ಆಸಕ್ತಿ ಮೂಡುವಂತೆ ಪ್ರೇರಣೆ ನೀಡಲಾಗುತ್ತದೆ. ¨ಭವ್ಯಭಾರತದ ಪ್ರಜ್ಞಾವಂತ ನಾಗರಿಕರಾಗಲು ಅವರಿಗೆ ಶ್ರದ್ಧೆ,ನಿಷ್ಠೆ,ವಿನಯ,ಧೇಯತೆ,ಕಠಿಣ ಪರಿಶ್ರಮ ಪ್ರಯತ್ನ,ಸಮಯಪ್ರಜ್ಞೆ, ಸಂಶೋಧನಾ ಮಾರ್ಗದರ್ಶನ,ಆಳವಾದ ಅಧ್ಯಯನದ ಸದ್ಗುಣಗಳನ್ನು ಬಿತ್ತಿ ಬೆಳಸಲಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ,ನೈತಿಕ,ಮಾನವೀಯ ಮೌಲ್ಯಗಳನ್ನು ವೃದ್ದಿಸಲು ರಕ್ತದಾನ,ನೇತ್ರದಾನ,ಸ್ವಚ್ಚತಾ ಅಭಿಯಾನ,ಪರಿಸರ ಸಂರಕ್ಷಣೆ,ಕಾನೂನು ಅರಿವು, ಸಂವಿಧಾನ ದಿನಾಚಾರಣೆ, ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಮತ್ತು ಸಂರಕ್ಷಣೆ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎನ್.ಎಸ್.ಎಸ್., ಯುಥರೆಡಕ್ರಾಸ್,ಪ್ಲೇಸ್ಮೆಂಟ್ ಸೆಲ್, ವಿದ್ಯಾರ್ಥಿಕಲ್ಯಾಣ ಮೊದಲಾದ ಘಟಕಗಳು ಕಾರ್ಯನಿರ್ವಹಿಸುತ್ತವೆ.
ಒಟ್ಟಿನಲ್ಲಿ ಶೈಕ್ಷಣಿಕ ಪ್ರಗತಿಯ ಜೊತೆಗೆ ಕೌಶಲ್ಯಾಧಾರಿತ, ವೃತ್ತಿಪರ ವ್ಯಕ್ತಿತ್ವ, ಕರ್ತವ್ಯಪ್ರಜ್ಞೆ, ಸಾಮಾಜಿಕ ಕಳಕಳಿ ನಾಯಕತ್ವ ಈ ಮೊದಲಾದ ಅಂಶಗಳನ್ನು ರೂಢಿಗೊಳಿಸಲಾಗುತ್ತದೆ. “ಅರಿವೇ ಗುರು” ಎನ್ನುವ ಹಾಗೆ ವಿದ್ಯಾರ್ಥಿಗಳಲ್ಲಿ ಸ್ವಅರಿವು ಮೂಡಿಸಿ ಅವರ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಅವರನ್ನು ಹೊಸ ಮನ್ವಂತರಕ್ಕೆ ಕೊಂಡೊಯ್ಯಲಾಗುವುದು. ವರ್ತಮಾನದ ಅಗತ್ಯಗಳನ್ನು ಪೂರೈಸಿಕೊಂಡು “ವಿದ್ಯಾರ್ಥಿಗಳೇ ಸಂಪತು” ಎಂಬ ಧ್ಯೇಯದೊಂದಿಗೆ ನಮ್ಮ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತದೆ.
